ಟೋಕಿಯೊ ಒಲಿಂಪಿಕ್ಸ್ -2020: ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಚಿನ್ನ

0

ಸುವರ್ಣಪರ್ವ ಸುದ್ದಿ

ದೆಹಲಿ : ಭಾರತದ ಪುರುಷ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಶನಿವಾರ 87.58 ಮೀಟರ್ ಎಸೆದು ಚಿನ್ನದ ಪದಕ ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ಪಡೆದ ಮೊದಲ ಆಟಗಾರ ಎನಿಸಿಕೊಂಡರು.

ನೀರಜ್‌ಗಿಂತ ಮೊದಲು ಯಾರೂ ಸಹ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಪದಕ ನೀಡಿರಲಿಲ್ಲ. ಅಲ್ಲದೇ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಆಟಗಾರ ಎನಿಸಿದರು.

ಇದಕ್ಕೂ ಮೊದಲು ಪುರುಷ ಶೂಟರ್ ಅಭಿನವ್ ಬಿಂದ್ರಾ ಬೀಜಿಂಗ್ ಒಲಿಂಪಿಕ್ಸ್ -2008 ರಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದರು.

Leave A Reply

Your email address will not be published.

error: Content is protected !!