ಯಲಬುರ್ಗಾ ವಕೀಲರ ಸಂಘದ ಅಧ್ಯಕ್ಷರಾಗಿ ಪ್ರಕಾಶ ಬೇಲೇರಿ ಗೆಲುವು

0


* ವಕೀಲರ ಸಂಘಕ್ಕೆ ಬದ್ಧರಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ


ಯಲಬುರ್ಗಾ: ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಪ್ರಕಾಶ ಬೇಲೇರಿ ಅವರು ಗೆಲುವು ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಪಟ್ಟಣದ ವಕೀಲರ ಸಂಘದ ಕಛೇರಿಯಲ್ಲಿ ಶನಿವಾರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚುನಾವಣೆ ಜರುಗಿದ್ದು ಒಟ್ಟು ೮೮ ಜನರು ಮತ ಚಲಾಯಿಸಿದ್ದು ಇದರಲ್ಲಿ ಒಂದು ಮತ ತಿರಸ್ಕೃತಗೊಂಡಿದೆ.


೩೮ ಮತಗಳನ್ನು ಪಡದು ಯು.ಎಸ್ ಮೆಣಸಗೇರಿ ಅವರು ಪ್ರಕಾಶ ಬೇಲೇರಿ ವಿರುದ್ಧ ಸೋಲನ್ನು ಅನುಭವಿಸಿದರು. ಮೆಣಸಗೇರಿ ಬಣ ಈರಣ್ಣ ಕೋಳೂರು ಅವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ೫೬ ಮತವನ್ನು ಪಡೆದು ಗೆಲವು ಸಾಧಿಸಿದರು. ಕೋಳೂರು ವಿರುದ್ಧ ೩೨ ಮತ ಪಡದು ಜಗದೀಶ್ ತೊಂಡಿಹಾಳ ಸೋತರು.


ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಎಚ್. ಹಿರೇಮನಿ ೫೮(ಗೆಲುವು), ಅಕ್ಕಮಹಾದೇವಿ ಪಾಟೀಲ್ ೩೦,(ಸೋಲು), ಖಜಾಂಚಿ ಸ್ಥಾನಕ್ಕೆ ಕೆ.ಆರ್.ಬೆಟಗೇರಿ ೫೩( ಗೆಲುವು),ಅಮರೇಶ ಹಡಪದ ೩೫ (ಸೋಲು), ಇನ್ನೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎ.ಎಂ.ಪಾಟೀಲ್ ಹಾಗೂ ಮಹಾಂತೇಶ ಬೂದ ಗುಂಪಾ ಇಬ್ಬರಿಗೆ ತಲಾ ೪೪ ಮತವನ್ನು ಪಡೆದರು ಅಂತಿಮವಾಗಿ ಚೀಟಿ ಎತ್ತುವ ಆಯ್ಕೆ ಪ್ರಕೀಯಯಲ್ಲಿ ಎ.ಎಂ ಪಾಟೀಲ್ ಜಯ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಆರ್.ಜಿ.ಕುಷ್ಟಗಿಶೆಟ್ಟರ್, ಮಲ್ಲಿಕಾರ್ಜುನ್ ನಾಯ್ಕರ್ ತಿಳಿಸಿದರು.


ಇದೇ ಮೊದಲ ಬಾರಿಗೆ ವಕೀಲರ ಚುನಾವಣೆ ನಡೆದ್ದು ಬೇಲೇರಿ ಮೆಣಸಗೇರಿ ನಡುವೆ ತೀರ್ವ ಜಿದ್ದಾಜಿದ್ದಿ ನಡೆದಿತ್ತು ಅಲ್ಪ ಮತಗಳಿಂದ ಯು.ಎಸ್.ಮೆಣಸಗೇರಿ ಸೋಲನ್ನು ಅನುಭವಿಸಿದರು. ತಮ್ಮ ಬಣದ ಈರಣ್ಣ ಕೋಳೂರು ಅವರು ಪ್ರಧಾನ ಕಾರ್ಯದರ್ಶಿಯಾಗಿ ಗೆಲುವು ಪಡೆದಿದ್ದಾರೆ. ಬೇಲೇರಿ ಬಣಕ್ಕೆ ಅಧ್ಯಕ್ಷ ಸೇರಿ ೪ ಸ್ಥಾನಗಳಲ್ಲಿ ಜಯಭೇರಿ ಪಡೆದರು.
ವಿಜಯೋತ್ಸವ ಆಚರಣೆ: ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಬೇಲೇರಿ ಹಾಗೂ ಇತರೆ ಪದಾಧಿಕಾರಿಗಳನ್ನು ಸನ್ಮಾನಿಸಿ ಸಿಹಿ-ತಿನಿಸಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಈ ವೇಳೆ ವಕೀಲರಾದ ಬಿ.ಎಂ.ಶಿರೂರು, ಸಿ.ಎಚ್.ಪಾಟೀಲ್, ಎಸ್.ಎನ್.ಶ್ಯಾಗೋಟಿ, ಪ್ರಭುರಾಜ ಕಲಬುರ್ಗಿ, ರಾಮಣ್ಣ ಸಾಲಭಾವಿ, ಸಿ.ಎಸ್.ಬನ್ನಪ್ಪಗೌಡ್ರು, ಶಂಕರಗೌಡ ಗೆದಗೇರಿ, ಸಿ.ಪಿ ಪಾಟೀಲ್, ಇಂದಿರಾ ಉಳ್ಳಾಗಡ್ಡಿ, ಕೋಟೇಶ ಭೂತೆ, ದಾದುಸಾಬ ಎಲಿಗಾರ, ಶಿವರಾಜ, ಇದ್ದರು.ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇವೆ: ನೂತನ ಅಧ್ಯಕ್ಷ ಬೇಲೇರಿ


ನನಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲು ಮತ ನೀಡಿದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ. ಈಗ ಚುನಾವಣೆ ಮುಗಿದಿದೆ. ಎಲ್ಲಾ ವಕೀಲರನ್ನು ವಿಶ್ವಾಸಕ್ಕೆ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ, ವಕೀಲರ ಸಂಘಕ್ಕೆ ಬದ್ಧರಾಗಿ ನನಗೆ ಸಿಕ್ಕಿರುವ ಅವಧಿಯಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ವಕೀಲರ ಹಿತವನ್ನು ಕಾಪಾಡಲಾಗುವುದು
-ಪ್ರಕಾಶ ಬೇಲೇರಿ, ನೂತನ ವಕೀಲರ ಸಂಘದ ಅಧ್ಯಕ್ಷರು ಯಲಬುರ್ಗಾ.

Leave A Reply

Your email address will not be published.

error: Content is protected !!