ಬೆಂಬಲಿಗರ ಸಭೆ ಕರೆದು ಮುಂದಿನ ರಾಜಕೀಯ ನಿರ್ಧಾರ ಪ್ರಕಟ: ಬಿಜೆಪಿ ಟಿಕೇಟ್ ವಂಚಿತ ಬಸವಲಿಂಗಪ್ಪ ಭೂತೆ ಹೇಳಿಕೆ

0

ಸುವರ್ಣಪರ್ವ ಸುದ್ದಿ


ಯಲಬುರ್ಗಾ: ಈ ಭಾರಿ ನಾನು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಟಿಕೇಟ್ ಸಿಗುವ ವಿಶ್ವಾಸವಿತ್ತು, ಪಕ್ಷದ ಹೈಕಮಾಂಡನಲ್ಲಿ ನನ್ನ ಪರವಾಗಿ ಒಲವು ವ್ಯಕ್ತವಾಗಿತ್ತು ಕೊನೆಗಳಿಗೆಯಲ್ಲಿ ಹಣದ ರಾಜಕಾರಣದಿಂದ ನಮಗೆ ಟಿಕೇಟ್ ಕೈತಪ್ಪಿದೆ. ಹೀಗಾಗಿ ಶೀಘ್ರದಲ್ಲಿ ನನ್ನ ಬೆಂಬಲಿಗರ ಸಭೆ ಕರೆದು ಮುಂದಿನ ರಾಜಕೀಯ ನಿರ್ಧಾರವನ್ನು ನಾನು ಪ್ರಕಟಿಸುತ್ತೇನೆ ಎಂದು ಬಿಜೆಪಿ ಟಿಕೇಟ್ ವಂಚಿತ ಬಸವಲಿಂಗಪ್ಪ ಭೂತೆ ಅವರು ತಮ್ಮ ಅಸಮಧಾನವನ್ನು ಹೊರ ಹಾಕಿದರು.


ಈ ಕುರಿತು ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲಿ ಅಭಿಮಾನಿಗಳು, ಬೆಂಬಲಿಗರು ಸಭೆ ಕರೆದು ಚರ್ಚಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವದು. ಬಿಜೆಪಿ ಟಿಕೇಟ್ ಸಿಗುವ ಲಕ್ಷಣಗಳು ಇದ್ದರು ಅದನ್ನು ಹಣದ ಪ್ರಭಾವ ಬೀರಿ ತಪ್ಪಿಸಿದ್ದಾರೆ.


ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಅಧಿಕಾರಕ್ಕಾಗಲಿ, ಕುಟುಂಬದ ಬೆಳವಣಿಗೆಗಾಗಲಿ ನಾವು ರಾಜಕಾರಣ ಮಾಡುವ ಅವಶ್ಯಕತೆ ನನ್ನಗಿಲ್ಲ. ಸೇವಾ ಮನೋಭಾವದಿಂದ ೪ದಶಕಗಳ ಕಾಲದಿಂದ ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದೇನೆ. ನಾನು ಬಿಜೆಪಿ ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದರು, ಪಕ್ಷದ ನಾಯಕರು ನನ್ನ ಹಿರಿತನವನ್ನು ಪರಿಗಣಿಸಿ ಗುರುತಿಸುವ ಕೆಲಸ ಮಾಡಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಹಾಲಪ್ಪ ಆಚಾರ ಅವರು ಪಕ್ಷದಲ್ಲಿ ನಮ್ಮನ್ನು ನೆಡಸಿಕೊಳ್ಳುವ ರೀತಿ ಅವರಿಗೆ ಗೊತ್ತಿಲ್ಲ.

ಅವರ ರಾಜಕೀಯ ನಡತೆಗೆ ನನ್ನಗೆ ತೀವ್ರ ಬೇಸರವಾಗಿದೆ. ಕಳೆದ ೫ ವರ್ಷದಲ್ಲಿ ಪಕ್ಷದಲ್ಲಿ ನನ್ನಗೆ ಯಾವುದೇ ಸ್ಥಾನ ಮಾನ ನೀಡಿಲಿಲ್ಲ. ತಮ್ಮ ಅಧಿಕಾರಕ್ಕಾಗಿ ನಮ್ಮಂತಹ ಹಿರಿಯರನ್ನು ಬಳಕೆ ಮಾಡಿಕೊಂಡರು ವಿನಹಃ ನಾವು ಹೇಳಿದ ಸಾಮಾನ್ಯ ಮುಂದಾಗಲಿಲ್ಲ. ಕ್ಷೇತ್ರದಲ್ಲಿ ಅನುಕಂಪ ರಾಜಕಾರಣಕ್ಕೆ ಒಂದೇ ಸಲ ಅವಕಾಶ ಕೊಡುತ್ತಾರೆ. ಹಣ ಮತ್ತು ಬಲ ತೋಳ ಬಲದ ರಾಜಕಾರಣಕ್ಕೆ ಅವಕಾಶ ನೀಡುವದಿಲ್ಲ ಎನ್ನುವದಕ್ಕೆ ಈ ಚುನಾವಣೆಯ ಫಲಿತಾಂಶವೇ ಸಾಕ್ಷಿಯಾಗಲಿದೆ ಎಂದರು.


ಆಹ್ವಾನ: ಮಾಜಿ ಸಚಿವ ಜನಾರ್ಧನರೆಡ್ಡಿಯ ಕೆಕೆಆರ್‌ಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಪಕ್ಷದವರು ನನ್ನನ್ನು ಸಂಪರ್ಕ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವನಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವದಿಲ್ಲ ತಿಳಿಸಿದರು.

Leave A Reply

Your email address will not be published.

error: Content is protected !!