ಬಿಜಕಲ್ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ

0

ಸುವರ್ಣ ಪರ್ವ ಸುದ್ದಿ

ಕುಷ್ಟಗಿ

ಕಲುಷಿತ ನೀರನ್ನ ಸೇವಿಸಿ ಅಸ್ವಸ್ಥರಾದ ಹಾಗೂ ಬಾಲಕಿಯ ಸಾವಿಗೀಡಾದ ಘಟನೆ ಹಿನ್ನೆಲೆಯಲ್ಲಿ ತಾಲೂಕ ಬಿಜಕಲ್ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭಾನುವಾರ ಬೆಳಗ್ಗೆ ತಾಲೂಕಿನ ಬಿಜಕಲ್ ಗ್ರಾಮಕ್ಕೆ ಭೇಟಿ ನೀಡಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ರಾಜ್ಯ ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪರಿಹಾರ ನಿಧಿಯಿಂದ ವತಿಯಿಂದ ರು 2 ಲಕ್ಷ ಪರಿಹಾರ ನೀಡಿದ್ದಾರೆಂದು ಎಂದು ಹೇಳಿದರು.

ನೂತನ ಸಚಿವರಾಗಿ ಆಗಮಿಸಿದ್ದ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು. ನಂತರ ಅವರೋಂದಿಗೆ ಗ್ರಾಮಕ್ಕೆ ತೆರಳಿ ಸಂಬಂದ ಪಟ್ಟ ಅಧಿಕಾರಿಗಳಿಂದ ವರದಿ ಪಡೆದುಕೊಂಡು ಸಮಸ್ಯೆ ಸರಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ದೇವೇಂದ್ರಪ್ಪ ಬಳೂಟಿಗಿ, ರಾಜಶೇಖರ್ ಇಟ್ನಾಳ್, ತುಕಾರಾಂ ಸರ್ವೇ, ದುರುಗಪ್ಪ ವಡಿಗೇರಿ, ರಮೇಶ್ ಕೊಳ್ಳಿ, ಪರಶುರಾಮ ನಾಗರಾಳ, ಚಂದ್ರಕಾಂತ ವಡಗೇರಿ, ಸುಕುಮನಿ ಸ್ವಾಮಿ ಗುರುವಿನ,ಹಾಗೂ ಗ್ರಾಮದ ಹಿರಿಯರು,ಗ್ರಾಮಸ್ಥರು,ಅಧಿಕಾರಿಗಳು,ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!