ಪತ್ರಕರ್ತರು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆಯುವವರು: ಲಲಿತಾರಾಣಿ ಶ್ರೀರಂಗದೇವರಾಯಲು

0

* ಆನೆಗೊಂದಿಯಲ್ಲಿ ಮಾಧ್ಯಮ ಆಕಾಡೆಮಿ ಪ್ರಶಸ್ತಿ ವಿಜೇತ ಕೆ.ನಿಂಗಜ್ಜಗೆ ಸನ್ಮಾನಗಂಗಾವತಿ: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಕಾಪಾಡುವ ಜತೆಗೆ ದೇಶದ ಅಭಿವೃದ್ಧಿಗೆ ಪತ್ರಕರ್ತರು ಮುನ್ನುಡಿ ಬರೆಯುವವರಾಗಿದ್ದಾರೆಂದು ಆನೆಗೊಂದಿ ರಾಜವಂಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು.


ಅವರು ಆನೆಗೊಂದಿ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಕರ್ನಾಟಕ ಮಾಧ್ಯಮ ಆಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತ ಕೆ.ನಿಂಗಜ್ಜ ಹಾಗೂ ಹಿರಿಯ ಪತ್ರಕರ್ತ ಕೆ.ಮಲ್ಲಿಕಾರ್ಜುನ ಸಾಣಾಪೂರ ಇವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಕೆ.ನಿಂಗಜ್ಜ ಆನೆಗೊಂದಿ ಹನುಮನಹಳ್ಳಿಯವರಾಗಿದ್ದು ಪತ್ರಿಕಾರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಆನೆಗೊಂದಿ ಗಂಗಾವತಿಗೆ ಕೀರ್ತಿ ತಂದಿದ್ದಾರೆ. ಇವರ ತಂದೆಯವರಾದ ಬಸಣ್ಣ ಆನೆಗೊಂದಿಯಲ್ಲಿ ೩೦ ವರ್ಷಗಳ ಕಾಲ ಬಾಳಿ ಬದುಕಿ ಜನರ ಪ್ರೀತಿ ಗಳಿಸಿದ್ದರು. ಅವರ ಪುತ್ರ ಕೆ.ನಿಂಗಜ್ಜ ಆನೆಗೊಂದಿ ಸೇರಿ ಇಡೀ ಗಂಗಾವತಿ ತಾಲೂಕಿನಲ್ಲಿ ಪ್ರಗತಿಗೆ ಪೂರಕವಾದ ವರದಿಗಳನ್ನು ಬರೆಯುವ ಮೂಲಕ ಹತ್ತು ಹಲವು ಯೋಜನೆಗಳ ಅನುಷ್ಠಾನಕ್ಕೆ ಕಾರಣರಾಗಿದ್ದಾರೆ.

ಇದನ್ನು ರಾಜ್ಯ ಸರಕಾರ ಹಾಗೂ ಕರ್ನಾಟಕ ಮಾಧ್ಯಮ ಆಕಾಡೆಮಿ ಗುರುತಿಸಿ ೨೦೧೯ ನೇ ಸಾಲಿನ ಮಾಧ್ಯಮ ಆಕಾಡೆಮಿ ಘೋಷಣೆ ಮಾಡಿರುವುದು ಸಂತೋಷದ ಸಂಗತಿ ಇನ್ನಷ್ಟು ಅತ್ಯುತ್ತಮ ವರದಿಗಳನ್ನು ಬರೆಯುವ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅದೇ ರೀತಿ ಸಾಣಾಪೂರ ಗ್ರಾಮದ ಕೆ.ಮಲ್ಲಿಕಾರ್ಜುನ ಪತ್ರಿಕಾ ರಂಗದಲ್ಲಿ ಕಳೆದ ೩೦ ವರ್ಷಗಳಿಂದ ಇದ್ದು ಕೆ.ನಿಂಗಜ್ಜನವರಂತಹ ಅನೇಕ ಪತ್ರಕರ್ತರಿಗೆ ಮಾರ್ಗದರ್ಶನ ಮಾಡಿ ಒಳ್ಳೆಯ ವರದಿಗಳನ್ನು ಬರೆಯಲು ಪ್ರೇರೆಣೆಯಾಗಿದ್ದಾರೆ.

ಆನೆಗೊಂದಿ ಹಾಗೂ ೧೭ ಹಳ್ಳಿಗಳ ಜನರ ಪ್ರೀತಿಗೆ ಇಬ್ಬರೂ ಪತ್ರಕರ್ತರು ಪಾತ್ರರಾಗಿದ್ದು ಇವರಿಗೆ ಆಗುತ್ತಿರುವ ಸನ್ಮಾನಗಳೇ ಸಾಕ್ಷಿಯಾಗಿ ಎಂದರು.


ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ, ಹರಿಹರದೇವರಾಯಲು, ಕುಪ್ಪರಾಜು, ಸುದರ್ಶನವರ್ಮಾ, ಟಿ.ಜಿ.ಬಾಬು, ವೀರರಾಘವಲು. ವೈ.ರಮೇಶ, ಚಿತ್ರನಟ ವಿಷ್ಣುಜೋಶಿ, ಗ್ರಾ.ಪಂ.ಹಾಲಿ ಮಾಜಿ ಸದಸ್ಯರು ಸುತ್ತಲಿನ ಗ್ರಾಮಗಳ ಗ್ರಾಮಸ್ಥರಿದ್ದರು.

Leave A Reply

Your email address will not be published.

error: Content is protected !!