ಗಂಗಾವತಿ ತಹಶಿಲ್ದಾರ ಯು.ನಾಗರಾಜ್ ವರ್ಗಾವಣೆ

0

* ಅಧಿಕಾರ ಸ್ವೀಕಾರ ಮಾಡಿದ ನೂತನ ತಹಶಿಲ್ದಾರ ಮಂಜುನಾಥ

ಸುವರ್ಣಪರ್ವ ಸುದ್ದಿ.

ಗಂಗಾವತಿ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ತಹಶಿಲ್ದಾರರಾದ ಯು.ನಾಗರಾಜ್ ಅವರನ್ನು ಸರ್ಕಾರ ಸ್ಥಳ ನಿಗದಿ ಮಾಡದೇ ಇದೀಗ ವರ್ಗಾವಣೆ ಮಾಡಿದ್ದು, ಯು.ನಾಗರಾಜ್ ಅವರ ಸ್ಥಾನಕ್ಕೆ ರಾಯಚೂರಿನ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿದ್ದ ಮಂಜುನಾಥ ಅವರನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ವರ್ಗಾವಣೆ ಮಾಡಲಾಗಿದ್ದು, ಸರ್ಕಾರದ ಅಧೀನ ಕಾರ್ಯದರ್ಶಿಯಾದ ಜಿ.ಎನ್ ಸುನೀಲ್ ಆದೇಶ ನೀಡಿದ್ದು, ನೂತನ ತಹಶಿಲ್ದಾರರಾಗಿ ಬಂದ ಮಂಜುನಾಥ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

Leave A Reply

Your email address will not be published.

error: Content is protected !!