ಕುಷ್ಟಗಿ ಕಾಂಗ್ರೆಸ್ ನಲ್ಲಿ ಏಕಚಕ್ರಾಧಿಪತ್ಯ, ಸರ್ವಾಧಿಕಾರಿ ಧೋರಣೆ: ದೇವೇಂದ್ರಪ್ಪ ಬಳೂಟಗಿ

0

ಸುವರ್ಣಪರ್ವ ಸುದ್ದಿ

ಕುಷ್ಟಗಿ : ಕಾಂಗ್ರೆಸ್ ಪಕ್ಷದಲ್ಲಿ ಏಕಚಕ್ರಾಧಿಪತ್ಯ ಹಾಗೂ ಸರ್ವಾಧಿಕಾರಿ ಧೋರಣೆಯಿದ್ದು ನನಗೆ ಅಸಮಾಧಾನವಾಗಿ ಬಿಜೆಪಿ ಸೇರಬೇಕಾಯಿತು ಎಂದು ನೂತನ ವಾಗಿ ಬಿಜೆಪಿಗೆ ಸೇರ್ಪಡೆ ಯಾದ ಮುಖಂಡ ದೇವೇಂದ್ರಪ್ಪ ಬಳೂಟಗಿ ಹೇಳಿದರು.

ಶನಿವಾರ ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸುಮಾರು ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಮಾಡಿದೆ. ಇತ್ತೀಚೆಗೆ ಅಲ್ಲಿ ಆದ ಬದಲಾವಣೆಗಳಿಂದ ಕಾಂಗ್ರೆಸ್ ಗೆ ವಿದಾಯ‌ ಹೇಳಿ ಬಿಜೆಪಿ‌ ಕಡೆ ಹೋಗಬೇಕಾಯಿತು.

ಪಕ್ಷ ಬಿಟ್ಟು‌ ಗಂಭೀರ ಆರೋಪ‌ ಮಾಡಲ್ಲ. ನಾವೆಲ್ಲ ರಾಜಕೀಯ ಸಿದ್ಧಾಂತ ಇಟ್ಟಕೊಂಡು ಮಾತನಾಡಬೇಕಾಗುತ್ತದೆ. ಹೀಗಾಗಿ ನಾನು‌ ಶಾಸಕ ಅಮರೇಗೌಡ ಬಯ್ಯಾಪುರ ಅವರ ಬಗ್ಗೆ ಹೇಳುವುದಾದರೆ ಏಕಚಕ್ರಾಧಿಪತಿ ನೀತಿ ಅವರದ್ದು. ಯಾರನ್ನೂ ತಮ್ಮ ಜೊತೆ ಕರೆಯುವದಿಲ್ಲ.

ಚುನಾವಣೆ ಸಮೀಸಿದ್ದರೂ ನಮಗೆ ಯಾವುದೆ ಬೆಲೆ ಕೊಡಲಿಲ್ಲ. ಅಲ್ಲದೇ ನನ್ನನ್ನು ಸೇರಿಸಿಕೊಂಡಾಗ ಅವರ‌ ಸೋಲಾಯಿತು. ನಂತರ 2008 ರಲ್ಲಿ ಗೆಲುವು ಆದಾಗ ಅದನ್ನ ಶಾಸಕರು ನನ್ನ ಸ್ವಂತ ವರ್ಚಸ್ಸು ಎಂದರು.

ಚುನಾವಣೆಯಲ್ಲಿ ಯಾರನ್ನೋ ಆರಿಸಿದರೆ ಉಪಯೋಗವಿಲ್ಲ, ದೇಶದ ಭವಿಷ್ಯ ಮುಖ್ಯ. ಆದರೆ ಕಾಂಗ್ರೆಸ್ ಪಕ್ಷದ ಸಿದ್ದಾಂತಗಳು ಸರಿಯಿಲ್ಲ ಎಂದು ಹೇಳಿದರು.

ನಾನು ಯಾವುದೇ ಆಮೀಷಕ್ಕೆ ಒಳಗಾಗಿ ಬಿಜೆಪಿ ಸೇರಿಲ್ಲ. ಕಾಂಗ್ರೆಸ್ ನಲ್ಲಿದ್ದಾಗ ಅವರ ಹತ್ತು ರೂಪಾಯಿ ಸಹ ನಾನು ತಿಂದಿಲ್ಲ. ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಾಗ ಲೆಟರಪ್ಯಾಡ ಖರ್ಚು 2, 500 ರೂ. ಸಹ ನಾನೆ ಕೊಟ್ಟಿದ್ದೇನೆ. ನಾನು ರಾಜಕೀಯ ನಿವೃತ್ತಿ ಯಾಗಬೇಕು ಅಂದುಕೊಂಡಿದ್ದೆ. ಆದರೆ ಅಭಿಮಾನಿಗಳ ಒತ್ತಾಯಕ್ಕೆ ರಾಜಕೀಯದಲ್ಲಿ ಇದ್ದೇನೆ. ನಾನಾಗಲೀ ನನ್ನ ಸಹೋದರರಾಗಲೀ ಯಾರೂ ಶಾಸಕರಿಂದ ದೊಡ್ಡ ಕೆಲಸ ಕಾಮಗಾರಿ ಪಡೆದಿಲ್ಲ. ಮೂಲತ ಗುತ್ತಿಗೆದಾರರಾಗಿದ್ದು ಯಾವುದೇ ಬೋಗಸ್ ಬಿಲ್ ಕೂಡ ಮಾಡಿಲ್ಲ ಎಂದರು.

ಬಿಜೆಪಿ ಭಾರತ ದೇಶಕ್ಕೆ ಅನಿವಾರ್ಯ, ಮೊದಲು ದೇಶ ಮುಖ್ಯ. ಪ್ರಧಾನಿ ನರೇಂದ್ರ ಮೋದಿಯವರು ಭಾರತ ತಲೆ ಎತ್ತುವ ಹಾಗೆ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ದೇಶದ ಜನತೆಗೆ ಅನೇಕ ಕೊಡುಗೆ ನೀಡಿದ್ದಾರೆ. ಇತರೆ ದೇಶಗಳು ದಿವಾಳಿಯಾದರೂ ಭಾರತ ಪ್ರಜ್ವಲಿಸುವ ಹಾಗೆ ಮಾಡಿದ್ದಾರೆ‌. ರೈತರಿಗೂ ಸಹ ಅನೇಕ ಯೋಜನೆಗಳನ್ನು ತಂದಿದ್ದು, ಪಿಎಂ ಕಿಸಾನ್ ನೇರವಾಗಿ ಅಕೌಂಟ್ ಗೆ ಜಮಾ ಆಗುತ್ತಿದೆ. ಜುಜುಬಿ ಕೆಲಸ ಬಿಜೆಪಿ ಮಾಡಲ್ಲ. ಸರಕಾರ ಪೊಳ್ಳು ಭರವಸೆ ಕೊಡುವುದು ಸಹಜ ಆದರೆ ಬಿಜೆಪಿ ಹೀಗೆ ಮಾಡಲ್ಲ. ಹೀಗಾಗಿ ನಾನು ಮನಸ್ಸು ಪರಿವರ್ತನೆ ಆಯಿತು. ಅದಕ್ಕೆ ಬಿಜೆಪಿ ಸೇರಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿಕೆ ಹಿರೇಮಠ, ರಾಜೇಶ ಪತ್ತಾರ, ಕಲ್ಲೇಶ ತಾಳದ, ಬಸವರಾಜ ಬುಡಕುಂಟಿ, ಅಂಬಣ್ಣ ಭಜಂತ್ರಿ, ಜೆಜೆ ಆಚಾರ, ಚಂದ್ರು ವಡಿಗೇರಿ ಇದ್ದರು.

Leave A Reply

Your email address will not be published.

error: Content is protected !!