ಕುರುಬರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಸಾವಿತ್ರಿ ಗೊಲ್ಲರ್ ನೇಮಕ

0

ಸುವರ್ಣಪರ್ವ ಸುದ್ದಿ

ಯಲಬುರ್ಗಾ: ಕರ್ನಾಟಕ ಪ್ರದೇಶ  ಕುರುಬರ ಸಂಘದ ಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದ ತಾ.ಪಂ‌ ಮಾಜಿ ಸದಸ್ಯೆ ಸಾವಿತ್ರಿ ಶರಣಪ್ಪ ಗೊಲ್ಲರ್ ಅವರನ್ನು ನೇಮಕ ಮಾಡಿ ಸಂಘದ ರಾಜ್ಯಾಧ್ಯಕ್ಷೆ ಪ್ರಭಾವತಿ ಕೆ.ಆರ್ ಅವರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಗಾಂಧಿನಗರದ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಾಯಲದಲ್ಲಿ ಮಂಗಳವಾರ ಬೈಲಾ ನಿಯಮದ ಅಡಿಯಲ್ಲಿ ಸಾವಿತ್ರಿ ಗೊಲ್ಲರ್ ಅವರನ್ನು ತಕ್ಷವೇ ಜಾರಿಗೆ ಬರುವಂತೆ ಕೊಪ್ಪಳ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕಗೊಳಿಸಿ,  ಆದೇಶ ಪ್ರತಿಯನ್ನು ಅವರಿಗೆ ನೀಡಿದ್ದಾರೆ. ಇನ್ನೂ ಮುಂದೆ ತಾವು ಸಮಾಜದ  ಸಭೆ ಸಮಾರಂಭ, ಹಾಗೂ ಸಮಾಜದ ಮಹಿಳೆಯರ ಅಭಿವೃದ್ಧಿ ಹಾಗೂ ಸಂಘದ ಬೈಲಾ ನಿಯಮದ ಅಡಿಯಲ್ಲಿ ಸಮಾಜದ ಸಂಘಟನೆಯ ಮೂಲಕ ಸೇವೆಯನ್ನು ಮಾಡಬೇಕು ಕೋರಲಾಗಿದೆ.

ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ನನ್ನನ್ನು ಗುರುತಿಸಿ ಕೊಪ್ಪಳ ಜಿಲ್ಲಾ ಕುರುಬರ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಖುಷಿ ತಂದಿದೆ. ಜಿಲ್ಲೆಯಾದ್ಯಂತ ಸಮಾಜ ಸಂಘಟನೆ ಮತ್ತು ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಸಂಘದ ನಿಯಮದಡಿ  ಕಾರ್ಯ ನಿರ್ವಹಿಸುತ್ತೇವೆ. ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಟಿರುವ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ನೂತನ ಜಿಲ್ಲಾಧ್ಯಕ್ಷೆ ಸಾವಿತ್ರಿ ಗೊಲ್ಲರ್ ತಿಳಿಸಿದರು.

Leave A Reply

Your email address will not be published.

error: Content is protected !!