ಯಲಬುರ್ಗಾ ಕ್ಷೇತ್ರದ ಮತದಾರರ ಹಾದಿ ತಪ್ಪಿಸಿದ್ರಾ ಮಾಜಿ ಸಚಿವ ರಾಯರೆಡ್ಡಿ..?

0

* ಪ್ರತಿಯೊಂದು ಮತಕ್ಕೆ 5 ಲಕ್ಷ ರೂ. ಹಣ ತೆಗೆದುಕೊಳ್ಳಬೇಕಂತೆ…!

ಸುವರ್ಣಪರ್ವ ಸುದ್ದಿ

ಕೊಪ್ಪಳ : ಪ್ರಭಾವಿ ರಾಜಕಾರಣಿ, ಪ್ರಜ್ಞಾವಂತ ರಾಜಕಾರಣಿ ಎಂದು ಕರೆಸಿಕೊಂಡಿದ್ದ ಮಾಜಿ ಬಸವರಾಜ್ ರಾಯರೆಡ್ಡಿ ಇದೀಗ ಜನರ ಹಾದಿ ತಪ್ಪಿಸುತ್ತಿದ್ದಾರೆಯೇ..? ಎನ್ನುವ ಮಾತುಗಳು ಅವರ ಮಾತಿನಿಂದ ಸ್ಪಷ್ಟವಾಗಿದೆ.

ಚುನಾವಣೆ  ಸಂಧರ್ಭದಲ್ಲಿಮತದಾರರು ದುಡ್ಡು ತೆಗೆದುಕೊಳ್ಳಬೇಡಿ ರಾಜಕಾರಣಿಗಳು ಎಂದು ಸಲಹೆ ನೀಡಬೇಕು. ಆದರೆ ಬಸವರಾಜ್ ರಾಯರೆಡ್ಡಿ ಅವರು ಮಾತ್ರ ಒಂದು ಹೆಜ್ಜೆ‌ ಮುಂದೆ ಹೋಗಿ ಒಬ್ಬ ಮತದಾರ ಒಂದು ವೋಟಿಗೆ ಬರೋಬ್ಬರಿ 5 ಲಕ್ಷ ತೆಗೆದುಕೊಳ್ಳಿ‌ ಎಂದು ಹೇಳಿಕೆ ನೀಡುವ ಮೂಲಕ ವಿವಾವ ಮೈಮೇಲೆ ಎಳೆದುಕೊಂಡಿದ್ದಾರೆ.

ಹೌದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಜಿಲ್ಲೆಯ ಕುಕನೂರಿನ ಪಟ್ಟಣ ಪಂಚಾಯತ್ ಚುನಾವಣೆಯ ಹಿನ್ನೆಲೆ ಪ್ರಚಾರ ಸಭೆ ನಡೆಸಿದ್ದು, ಮುಂದಿನ ಚುನಾವಣೆಯಲ್ಲಿ ಒಂದು ಮತಕ್ಕೆ ಕನಿಷ್ಠ 5 ಲಕ್ಷ ರೂ. ಕೇಳುವಂತೆ ಮತದಾರರಿಗೆ ಆಮೀಷದ ಆಸೆ ಹುಟ್ಟಿಸಿದ್ದಾರೆ ..


ಈ ಬಾರಿ ವಿಧಾನಸಭೆ ಚುನಾವಣೆಗೆ ಐದುನೂರು ಅಥವಾ ಸಾವಿರ ರೂಪಾಯಿಳಿಗೆ ವೋಟ್ ಹಾಕಬೇಡಿ, ಒಂದು ವೋಟ್‌ಗೆ 5 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿ. ಮನೆಯಲ್ಲಿ 10 ವೋಟ್ ಇದ್ದರೆ 50 ಲಕ್ಷ ರೂಪಾಯಿ ಸಿಗುತ್ತದೆ ಎಂದು ರಾಯರೆಡ್ಡಿ ಹೇಳಿಕೆ ಆಶ್ಚರ್ಯ ಮೂಡಿಸಿದ್ದಾರೆ
ರಾಜಕೀಯಕ್ಕೆ ಗಣಿಗಾರಿಕೆ ಮಾಡುವವರು ಬಂದಿದ್ದಾರೆ.ಅವರು ಹಣ ಚೆಲ್ಲಿ ರಾಜಕೀಯ ಮಾಡುತ್ತಾರೆ. ಹೀಗಾಗಿ ಚುನಾವಣೆ ವೇಳೆ ಹೆಚ್ಚಿನ ಹಣ ಹೇಳಿಕೆ ನೀಡಿ  ಮತದಾರರನ್ನು ಹಾದಿ ತಪ್ಪಿಸುತ್ತಿದ್ದಾರೆ.

ಇದೀಗ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಅವರ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ನಾನು ಹಣ ನೀಡುವ ರಾಜಕಾರಣಿಗಳು ಬಂದಾಗ ಇಂತಹ ಮೊತ್ತ ಕೇಳಿದ್ರೆ ಅವರು ರಾಜಕಾರಣ ಮಾಡೋದು ಬಿಟ್ಟು ಹೋಗ್ತಾರೆ ಅಂತಾ ಹೇಳಿಕೆ ನೀಡಿದ್ದೇನೆ.‌ ಇದ್ರಿಂದ ಭ್ರಷ್ಟಾಚಾರವಾದ್ರೂ ದೂರವಾಗುತ್ತೆ, ಪ್ರಾಮಾಣಿಕ ರಾಜಕಾರಣಿಗಳು ರಾಜಕಾರಣಿಗಳು ಉಳಿದುಕೊಳ್ತಾರೆ ಅಂತಾ ಹೇಳಿಕೆ ನೀಡಿದ್ದೇನೆ.ಇದನ್ನು ತಪ್ಪಾಗಿ ಅರ್ಥೈಸೋದು ಬೇಡ.  ‌‌‌‌‌———- ಬಸವರಾಜ್ ರಾಯರೆಡ್ಡಿ ಮಾಜಿ ಸಚಿವ ‌‌‌‌‌‌‌

Leave A Reply

Your email address will not be published.

error: Content is protected !!